Tuesday, January 30, 2018

ನನ್ನ ಓದಿನ ಹಿಂದಿನ ಕಾಣದ ಕೈಗಳು

“ಹಲ್ಲು ಇದ್ದವನಿಗೆ ಕಡಲೆ  ಇಲ್ಲ ಕಡಲೆ ಇದ್ದವನಿಗೆ ಹಲ್ಲಿಲ್ಲ"  ಈ ಮಾತನ್ನು ಬಹಳ ಹಿಂದಿನಿಂದಲೂ ಕೇಳಿಕೊಂಡು  ಬಂದಿದ್ದೇವೆ .ಈ ಮಾತು ನಮ್ಮ ಜೀವನದ  ಬೇರೆ ಬೇರೆ ಹಂತಗಳಲ್ಲಿ ಹೋಲಿಕೆಗೆ ಸಿಗುತ್ತದೆ. ಅಲ್ಲದೆ ನಮ್ಮ ಅನುಭವಕ್ಕೂ ಬಂದಿರುತ್ತದೆ .  ನನ್ನದು  ಒಂದು ರೀತಿಯ ಹೋರಾಟದ ಬದುಕು  !

ತಂದೆಯ ಕುಡಿತ, ಅಮ್ಮನ ಏಕ ದುಡಿಮೆಯ ನಡುವೆ ನಾನು ಓದುವ ಮನಸ್ಸು ಮಾಡಿದೆ.  ನಾನು ಹೆಸ್ಕೂಲು  ಓದುವಾಗ ಒಮ್ಮೆ 8 ನೇ  ತರಗತಿಯಲ್ಲಿ ಫೈಲಾದೆ .   ಗಣಿತ ಶಿಕ್ಷಕರೋರ್ವರ ಬಿಸಿ ಬಿಸಿ ಪೆಟ್ಟಿಗೆ ನಾನು ದಿನ ತಪ್ಪಿಸಿ "ಫೈಲ್ "ಎಂಬ ದೊಡ್ಡ ನಾಪ ಫಲಕ . ಆಗ ನನಗೆ ತುಂಬಾ ಬೇಜಾರಾಯಿತು.  ಕೊನೆಗೂ ನನ್ನ ತಾಯಿಯ ಒತ್ತಾಯಕ್ಕೆ ಮತ್ತೆ ಶಾಲೆ ಮುಂದುವರೆಸಿದೆ.  ಹೇಗೋ ಎಸ್.ಎಸ್.ಎಲ್.ಸಿ ಮುಗಿಯಿತು . ಪಿ .ಯು. ಸಿ ಯು ಮುಗಿಯಿತು .  ಕೊನೆಗೆ ಡಿಗ್ರಿ ಮಾಡಬೇಕೆಂಬ ಆಸೆ ನನಗೆ ಇತ್ತು. ಆಗ ನನ್ನ ತಾಯಿ ಪಾದೆಯ ಕೃಷ್ಣಯ್ಯ ಭಟ್ ಎಂಬವರಲ್ಲಿ ಖಾಯಂ ಕೆಲಸ ಮಾಡುತ್ತಿದ್ದರು. ಅಗ ನನಗೆ  ದುಡ್ಡಿನ ವ್ಯವಸ್ಥೆ ಮಾಡಿದರು .

ನಾನು ಡಿಗ್ರಿ ಓದುವಾಗಲೇ ಅಪರೂಪಕ್ಕೆ ಕೆಲಸವನ್ನು ಮಾಡುತ್ತಿದ್ದೆ . ನಾನು ಮಾಡಿರುವ ಕೆಲಸದ ಬಗ್ಗೆ ಹೆಚ್ಚು ವಿವರಣೆ ನೀಡಿದರೆ ನೀವು ನಂಬುವ ಸ್ಥಿತಿಯಲ್ಲಿ ಇರಲಿಕ್ಕಿಲ್ಲ ತೋಟದ ಕೆಲಸ, ಗೊಬ್ಬರ ಹೋರುವುದು, ಅಡಿಕೆ ಹೆಕ್ಕುವುದು, ಗಾರೆ ಕೆಲಸ, ರಬ್ಬರ್ ಮರಕ್ಕೆ ಸುಣ್ಣ ಹಚ್ಚುವುದು ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.  ರಾತ್ರಿ ಬಿಡುವಿನ ವೇಳೆ ಸಾಹಿತ್ಯ ಪುಸ್ತಕ ಓದುವ ಹುಚ್ಚು ಇತ್ತು. ಅಲ್ಲದೆ ಕನ್ನಡ ಮತ್ತು ತುಳು ಭಾಷೆಯಲ್ಲಿ ಕವನ ಬರೆಯುವ ಅಭ್ಯಾಸವನ್ನು ಮಾಡತೊಡಗಿದೆ.ಅಲ್ಲದೆ ಸ್ನೇಹಿತರ ಮೂಲಕ  ಜ಼ೊತೆಗೆ ರೇಡಿಯೊ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ  ಅವಕಾಶವೂ ಸಿಕ್ಕಿತು.


ನನ್ನ ರಜೆಯ ಹೆಚ್ಚಿನ  ಸಮಯವೆಲ್ಲ ದುಡಿತ್ತಕ್ಕೆ ಮೀಸಲು . ನನ್ನ ತಾಯಿ ಜೊತೆಗೆ ನನಗೆ ಸಹಾಯ ಮತ್ತು  ಮಾರ್ಗದರ್ಶನ ಮಾಡಿದವರು ಪಾದೆ  ಕೃಷ್ಟ್ಣಯ್ಯ  ಭಟ್ ಮತ್ತು ಅವರ ಮನೆಯವರು . ಕಷ್ಟ ಗಳ  ನಡುವೆ ಬೆಳೆದು ಬ೦ದ ಇವರಿಗೆ ಮತ್ತೂಬ್ಬರ ಕಷ್ಟವೂ ಅರ್ಥವಾಗುತ್ತಿತ್ತು . ಬಿ .ಎಡ್  ಮಾಡುವಂತೆ  ಕೃಷ್ಟ್ಣಯ್ಯ  ಭಟ್  ಮಗ ರಾಮಚಂದ್ರ ಭಟ್ ಪಾದೆ ಸಲಹೆ ನೀಡಿದರು . ಬರೇ ಪುಕ್ಕಟೆ ಸಲಹೆ ಕೊಟ್ಟು ಸುಮ್ಮನೆ ಇರಲಿಲ್ಲ ಬದಲಾಗಿ ಆರ್ಥಿಕ ಸಹಕಾರವನ್ನು ನೀಡಿದರು.  ರಾಮಚಂದ್ರ ಭಟ್ ರವರು ಎಲ್ಲವನ್ನೂ ಕೂಲಂಕಷವಾಗಿ ನೋಡುವವರು . ಪ್ರಾಮಾಣಿಕ ಕೆಲಸ ಮತ್ತು ನಂಬಿಕೆಯ ಮಾತಿಗೆ ಅವರ ಮೊದಲ ಪ್ರಾಶಸ್ತ್ಯ .  ನಾನು ಕೆಲಸ ಮಾಡುತ್ತಿದ್ದ ಹಣವೆಲ್ಲ ಬೇರೆ ಬೇರೆ ಕಾರಣಕ್ಕಾಗಿಯೇ  ಖರ್ಚು ಆಗುತ್ತಿತ್ತು .ಸಂಬಳ ತೆಗೆದುಕೊಳ್ಳುವಾಗ  300 ಅಥವಾ 500ಹೆಚ್ಚು ತೆಗೆದು ಕೊಳ್ಳುತ್ತಿದ್ದೆ .


 B .E d ವಿದ್ಯಾಭ್ಯಾಸದ ಸಮಯದಲ್ಲಿ ಕೇಳಿದಾಗಲೆಲ್ಲ ಆರ್ಥಿಕವಾಗಿ ನನಗೆ ಬಲ ನೀಡಿದವರು . ಸೋತವರಿಗೆ ಸದಾ ಹಸ್ತ ನೀಡುತ್ತ ಬಂದವರಲ್ಲಿ ಇವರು ಒಬ್ಬರು . ಅವರಿಗೆ  ಸುಳ್ಳು ಹೇಳಿದರೆ ಆಗವುದಿಲ್ಲ !  ತಾಯಿ, ಅಕ್ಕ, ನಾನು ತಮ್ಮ ಎಲ್ಲರೂ ಸದಾ ಒಡನಾಟವಿದ್ದ ಕಾರಣ ನಮ್ಮ ಮೆನೆಯವರ ಮೇಲೂ ಅಷ್ಟೇ  ವಿಶ್ವಾಸ ಇಟ್ಟಿದ್ದರು.  . ನನ್ನಲ್ಲಿ ವಿಷಯ  ನಿಷ್ಟತೆ  ಇತ್ತು  ಹೊರತು ಬಂಡವಾಳ  ಇರಲಿಲ್ಲ .  ನಾನೀಗ ಎಂ. ಎ ಪದವಿಯನ್ನು ಮುಗಿಸಿದೆ . ಇದರ ಬೆನ್ನಲ್ಲೇ ಪತ್ರಿಕೊಧ್ಯಮ  ವನ್ನು ಕಲಿಯುತ್ತಿದ್ದೇನೆ . ಇವತ್ತು ನಾನು ಎತ್ತರಕ್ಕೆ ಬೆಳೆಯಲು ಅವಕಾಶಕ್ಕೆ  ಈ ಕಾಣದ ಕೈಗಳೇ ಸಾಕ್ಷಿ


.

ಈಗ ಶಿಕ್ಷಕ ಕೆಲಸದತ್ತ ಹೆಚ್ಚು ಒಲವು ತೋರ್ಪಡಿಸದೆ ರೇಡಿಯೋ    ಮಾಧ್ಯಮವೊಂದರಲ್ಲಿ ಕೆಲಸ ಮಾಡುತ್ತಿದ್ದೆನೆ. ನಾನು ಮಂಗಳೂರಿನಿಂದ ಕಡಬಕ್ಕೆ ಹೋದಾಗಲೆಲ್ಲ ಅಪರೂಪಕ್ಕೆ ಮಾತನಾಡಲು ಹೋಗುತ್ತೆನೆ. ಅವರ ಮನೆಯವರ ಜೊತೆ ಮಾತು ಇಲ್ಲವಾದರೂ ಇಂದಿಗೂ ಅವರ ಮನೆಯವನ್ನು ಕಂಡಾಗ ಗೌರವದ ಭಾವನೆ ಇಂದಿಗೂ ಹಾಗೇಯೆ ಉಳಿದಿದೆ. ನನ್ನ ಜೀವನ ಶೈಲಿ ಬದಲಾಗಿರಬಹುದು ಆದರೆ ವ್ಯಕ್ತಿತ್ವ ಹಾಗೆಯೆ ಉಳಿದಿದೆ.  ಸಾಮಾಜಿಕವಾಗಿ ನಾನು ಇಂದು ಗುರುತಿಸಿಕೊಳ್ಲುವ ಮಟ್ಟಕ್ಕೆ ಬರಲು ತಾಯಿಯ ಶ್ರಮದ ಜೊತೆಗೆ ಬದುಕಿಗೆ ಹೊಸ ತಿರುವು ಕೊಟ್ಟ ಇವರ ಪಾತ್ರವೂ ಅಷ್ಟೇ ಇದೆ. ಈಗ ಪಾದೆ ಎಂಬ ಸ್ಥಳದಿಂದ ಕೃಷ್ಣಯ್ಯ ಭಟ್ ಅವರ ಕುಟುಂಬ ಪಂಜದಲ್ಲಿ ಮನೆ ಮಾಡಿದ್ದಾರೆ. ಸಮಯ ಸಿಕ್ಕಾಗ ಹೋಗಬೇಕೆಂಬ ಆಸೆ .ತಡರಾತ್ರಿ ಬಂದು ಮರುದಿನ ಬೇಗ ಹೋಗುವ ನನ್ನ ದಿನಚರಿ ನೋಡಿ ನನಗೆ ನನ್ನಲ್ಲೆ ಅಸಮಾಧಾನವಿದೆ. ಓದು ಮತ್ತು ದುಡಿಮೆ ಈಗ ಬರೇ ನೆನಪು ಮಾತ್ರ