Showing posts with label ಚುಟುಕಗಳು. Show all posts
Showing posts with label ಚುಟುಕಗಳು. Show all posts

Tuesday, December 06, 2016

ಬೆ೦ಬಲ


ಕ೦ಬಳಕ್ಕೆ ಇಲ್ಲವೇನೋ

ರಾಜಕೀಯ ನಾಯಕರ ಬೆ೦ಬಲ

ಹಾಗಾಗಿಯೇ ಸಭೆ ಸಮಾರಂಭದಲ್ಲೂ

ನಿದ್ದೆ ಮೂಗಿನಲ್ಲಿ ಸುರಿಸುತ ಸಿ೦ಬಳ...!!

ನಿರ್ಭಯ


ಶಾಲಾ ಮಕ್ಕಳಿಗೆ ಭಯವಿಲ್ಲ

ಹತ್ತಿರ ಬ೦ದರೂ ಪರೀಕ್ಷೆ

ಯಾಕೆ೦ದರೆ ...

ಹತ್ತರವರೆಗೆ ಪಾಸು ಮಾಡುತ್ತಾರಲ್ಲ?

ಅದೇ ಅವರಿಗೆ ಶ್ರೀ ರಕ್ಷೆ

ಪರಿಣಾಮ

ಬೀಡ ಮಾರುವ ಹುಡುಗ ನಾಲಗೆ ಸುಟ್ಟುಕೊ೦ಡ
ನೋಡುತ ತರುಣಿಯ ಕಣ್ಣ
ಆಕೆಯ ನಗುವಿಗೆ ಮೈ ಮರೆತು
ತಿ೦ದದ್ದು ಬರೇ ಸುಣ್ಣ...!!