Thursday, August 01, 2019

ಆದಾಯ ಮೂಲವಿಲ್ಲದ ಮಹಿಳೆಯರು ಸಂಘದ ಕಂತು ಕಟ್ಟಡಲು ಪರದಾಡುವುದನ್ನು ಗಮಸಿಸಿದ್ದೀರಾ?


ಹಲವು  ಉದ್ಯಮಿಗಳು ಸಾಲದ ಸಂಕಷ್ಟದಲ್ಲಿ    ಸಿಲುಕಿಕೊಂಡಿರುವ  ಬಗ್ಗೆ  ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಅಲ್ಲದೆ  ಸಂಕಷ್ಟದಲ್ಲಿರುವ  ಕೆಲ ಕಂಪೆನಿಗಳ ಹೆಸರುಗಳೂ ಹರಿದಾಡುತ್ತಿದೆ. ಇದಕ್ಕೆ ಕಾರಣ ಕೆಫೆ ಕಾಫಿ ಡೇ  ಸಂಸ್ಥಾಪಕ ಸಿದ್ದರ್ಥ್   ಅವರ  ಆತ್ಮಹತ್ಯೆ   ಘಟನೆ.   ಉದ್ಯಮಿಗಳ  ಬಗ್ಗೆ ನಾನು ಹೆಚ್ಚು ವಿವರಿಸಲು ಇಲ್ಲಿ ಹೋಗುತ್ತಿಲ್ಲ , ಬಂಡವಾಳ ಹೂಡಿಕೆ ಮಾಡಿ ಉದ್ಯಮ ನಡೆಸುವವರೇ   ಇಂತ ಪರಿಸ್ಥಿತಿಯಲ್ಲಿ ಇರುವಾಗ   ಸಮರ್ಪಕ ಆದಾಯದ  ಮೂಲವಿಲ್ಲದೆ  ವಿವಿಧ  ಸ್ವಸಹಾಯ  ಸಂಘದಿಂದ ಸಾಲ ತೆಗೆದ  ಗ್ರಾಮೀಣ ಮಹಿಳೆಯರು ಸಂಘದ ಕಂತು ಕಟ್ಟಡಲು ಪರದಾಡುತ್ತಿದ್ದಾರೆ!

ಇಂದು  ಹಳ್ಳಿಗಳಲ್ಲಿ  ವಿವಿಧ ಹೆಸರಿನ  ಸ್ವಸಹಾಯ ಸಂಘಗಳು ರಚನೆಗೊಂಡು ಮಹಿಳೆಯನ್ನು   ಸ್ವಾವಲಭಿಯನ್ನಾಗಿಸಿದೆ.    ಸಾಮಾಜಿಕ , ಆರ್ಥಿಕ ಸುಧಾರಣೆಗೂ  ಕಾರಣವಾಗಿದೆ.   ಹೆಚ್ಚಿನ  ಮಹಿಳೆಯರು   ವಿವಿಧ ಸ್ವಸಹಾಯ ಸಂಘಗಳಲ್ಲಿ ಸದಸ್ಯರಾಗಿದ್ದು, ಹಣಕಾಸು ಸಂಸ್ಥೆಗಳಿಂದ   ಬಡ್ಡಿ ದರದಲ್ಲಿ    ಲಕ್ಷ ರೂಪಾಯಿ ಸಾಲ ಪಡೆದವರಿದ್ದಾರೆ. ಕೆಲ ಮಹಿಳೆಯರು ಎರಡೆರಡು ಸಂಘಗಳಲ್ಲಿ   ಸೇರಿಕೊಂಡು ಮೂಲಭೂತ  ಸೌಕರ್ಯ ಸೇರಿದಂತೆ ಮಕ್ಕಳ ಉನ್ನತ  ಓದಿಗಾಗಿ ಸಾಲ ರೂಪದಲ್ಲಿ  ಹಣವನ್ನು ಪಡೆದುಕೊಂಡಿದ್ದಾರೆ. ಆದರೆ ಕೆಲಸವೇ ಸಿಗದಿರುವುದರಿಂದ   ನಿಯಮಿತವಾಗಿ ವಾರಕ್ಕೆ ಕಟ್ಟಬೇಕಾದ ಸಾಲದ ಕಂತುಗಳನ್ನು ಕಟ್ಟಲು ಸಾಧ್ಯವಾಗದ  ಸ್ಥಿತಿ ಎದುರಾಗಿದೆ.      


 ಜನ ಸಾಮಾನ್ಯರಿಗೆ ಈ ಲಕ್ಷ ರೂಪಾಯಿಗಳ  ಸಾಲ ದೊಡ್ಡ ಮೊತ್ತವೇ ಆಗಿದೆ.  ಸಂಘದ  ಗುಂಪಿನ ಸದಸ್ಯರು ಪ್ರತಿ ವಾರವೂ ೫೦೦ ಅಥವಾ  ೧,೦೦೦  ರೂಪಾಯಿ ಕಂತು ರೂಪದಲ್ಲಿ ಕಟ್ಟಲೇಬೇಕೆನ್ನುವ   ಡೆಡ್ಲೈನ್ ಇದೆ.     ಕಡಿಮೆ ಮಜೂರಿಗೆ ಬೀಡಿ ಕಟ್ಟಿ ಅಥವಾ ದಿನಗೂಲಿ ಕೆಲಸ ಮಾಡಿ ಸಂಘದ  ಸಾಲದ ಕಂತು ಕಟ್ಟುವ  ಅನಿವಾರ್ಯತೆ  ಗ್ರಾಮೀಣ ಭಾಗದ ಬಡ ಮಹಿಳೆಯರದ್ದು.  ಕೆಲ ಸ್ವಸಹಾಯ ಸಂಘಗಳಲ್ಲಿ   ಸದಸ್ಯರು  ವಾರದ  ಸಭೆಗೆ ಹಾಜರಾಗುತ್ತಿಲ್ಲ.  ಅದಕ್ಕೆ  ವೈಯಕ್ತಿಕ ಕಾರಣಳಿದ್ದರೂ  ಹೆಚ್ಚು  ಹಣದ ಕೊರತೆಯೇ ಆಗಿದೆ ಎಂಬುದು ಸತ್ಯ.    ಗುಂಪಿನ ಎಲ್ಲಾ ಸದಸ್ಯರ ಒಪ್ಪಿಗೆ ಮೇರೆಗೆ ವಿಶ್ವಾಸದಿಂದ   ಎಲ್ಲರಿಗೂ ಸಾಲವನ್ನು ನೀಡಿದ್ದರೂ ವಾರದ ಮೀಟಿಂಗ್ ದಿನ ಹಣ ಹೊಂದಾಣಿಕೆಗೆ ಮಹಿಳೆಯರು ಪಡುವ ಸಂಕಷ್ಟ ಹೇಳತೀರದು . ಸಂಘದ ಸದಸ್ಯ ಬಾಕಿ ಮಾಡಿದರೂ   ಹಣ ಕಟ್ಟಿರುವ   ಸದಸ್ಯರು ಉಳಿಕೆ ಹಣವನ್ನು ಭರ್ತಿ ಮಾಡಲೇಬೇಕೆಂಬ ನಿಯಮ ಕೆಲ  ಸಂಘದ ಅಧಿಕಾರಿಗಳದ್ದೂ ಇದೆ.ಮಾತ್ರವಲ್ಲದೆ ಕಂತು ಕಟ್ಟದ ಸದಸ್ಯರ ಮನೆಗೆ ಗುಂಪಿನ ಸದಸ್ಯರು ಸಾಮೂಹಿಕವಾಗಿ ಹೋಗಿ ವಿಚಾರಿಸಿದ ಉದಾಹರಣೆಗಳೂ ಇವೆ  ಗುಂಪಿನ ಮುಖ್ಯಸ್ಥರು ಮತ್ತು ಸಹ ಸದಸ್ಯರ ಒತ್ತಡ  ಕಿರಿಕಿರಿಯನ್ನು ಸಹಿಸಿಕೊಂಡು ತಾಳ್ಮೆಯಿಂದ ಹೊಂದಾಣಿಕೆ ಮಾಡಿಕೊಂಡು  ಸಮಾಜದಲ್ಲಿ ಬದುಕುತ್ತಿದ್ದಾರೆ.  

ವಿಪರ್ಯಾಸವೆಂದರೆ  ಪ್ರತಿಯೊಂದು ಮನೆಯಲ್ಲಿಯೂ  ತಿನ್ನುವ ಕೈಗಗಳ ಸಂಖ್ಯೆ ಹೆಚ್ಚಾಗಿದ್ದು ,  ದುಡಿಯುವ ಕೈಗಳು ಕಡಿಮೆ.   ಕೂಲಿ ಕೆಲಸ  ಮಾಡುವ ಸಾಮಾನ್ಯ   ಜನರಿಗೆ ವಾರ ಪೂರ್ತಿ ಕೆಲಸ ಸಿಗುತ್ತಿಲ್ಲ.  ಮನೆಯ ಕೆಲ ಯುವಕರು ಕೆಲಸಕ್ಕೆ ಹೋಗುತ್ತಿಲ್ಲ. ಮನೆ ಸದಸ್ಯರು ಹಣ ಕಟ್ಟಲು ಸಹಾಯ ಮಾಡುತ್ತಿದ್ದರೂ ಕೆಲಸವಿಲ್ಲದ ಕಾರಣ ಅದೂ ಸಾಧ್ಯವಾಗುತ್ತಿಲ್ಲ.  ಹೀಗಾಗಿ ಜೀವನ ನಿರ್ವಹಣೆ ಜೊತೆಗೆ ಸಂಘದ ಕಂತುಗಳನ್ನು   ಕಟ್ಟಲು ಮಹಿಳೆಯರು   ತಮ್ಮ ಚಿನ್ನಾಭರಣವನ್ನು ಅಡವಿಡುವ ಪರಿಸ್ಥಿತಿ ಬಂದೊದಗಿದೆ.  ಸರ್ಕಾರವು  ಪ್ರತಿಯೊಂದು  ಬಡ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿಯೋ ಅರೆ ಸರ್ಕಾರಿಯೋ  ನಿತ್ಯ ಕೆಲಸ ಕೊಡಿಸಬಾರದೇಕೆ?  ಈ ಮೂಲಕ ತನ್ನ ಸಾಲವನ್ನು ಆತ್ಮವಿಶ್ವಾಸದಿಂದ ಕಟ್ಟಲು ಸಾಧ್ಯವಾಗುತ್ತದೆ ,ಜೀವನ ಮಟ್ಟವನ್ನೂ ಸುಧಾರಿಸಲು ಸಾಧ್ಯವಿದೆ ಅಲ್ವೇ?

No comments:

Post a Comment