Tuesday, December 06, 2016

ಮಾರ್ಗದರ್ಶಕರು

ಬಾಲ್ಯ ಮತ್ತು ತಾರುಣ್ಯದ
ನೆನಪುಗಳ ಪಳೆಯುಳಿಕೆ
ಚಿಂತೆಗಳ ದೂರವಿರಿಸಿ ,
ವೃದ್ದಾಪ್ಯ ಕಳೆವ ಅನಿವಾರ್ಯತೆ ಮನಕೆ ll
ನೈಜತೆಯ ರೂಪ ಮಾಯವಾಗಿ
ಕ್ಷೀಣಗೊಂಡ ದೇಹಶಕ್ತಿ
ಆದರೂ ಕಿರಿಯರಿಗೆ ಮಾರ್ಗದರ್ಶಕರು
ಪೂಜ್ಯರೆಂಬ ದೇವ ಭಕ್ತಿ ll
ಬದುಕಿನ ಕೃತಾರ್ಥತೆಯ ಕಾಣುವ ಭಾಗ್ಯ ಶಾಲಿ
ದಕ್ಕುವುದು ಕೆಲವರಿಗೆ ಮಾತ್ರ
ಕುಟುಂಬದೊಳಗೆ ಅನಾಥರು
ಬೇಕಿಲ್ಲ ಅನುಕಂಪ ,ಮಾನವೀಯತೆಯ ಸೂತ್ರ !
 ರೊಚ್ಚುಗೆದ್ದ ಗಾಳಿಯಂತೆ ಯುವ ಮನಸು
ಸ್ವಾರ್ಥ ಬೀಡು ಬಿಟ್ಟು ಮರೆಯಾಗಿದೆ ಮೌಲ್ಯ
ಶೇಷಾ ಯುಷ್ಯ ವನ್ನು ಕಳೆವ ಮುದಿ ದೇಹಕೆ
ಕಾಡುವುದೊಂದೆ ಮರೆಯಲಾಗದ ಬಾಲ್ಯ ll
ಪೋಕಿ ಜೀವನದ ವ್ಯಾಮೋಹದಲಿ
ಹಿರಿಯರಿಗಿಲ್ಲ ಶಾಂತಿಯ ಆನಂದ ಧಾಮ
ಕೊನೆಗಾಲಕೆ ಸಿಕ್ಕಿತೊಂದು ಸೂರು
ಯಾರು ಬಂಧುಗಲಿಲ್ಲ ,ಅನಾಥರ ವೃದ್ದಾಶ್ರಮ ll
ಬಾಳಸಂಜೆಯಲಿ ಬಾಳುವಂತೆ
ಹಿರುಯರ ಬಗ್ಗೆ ಯೂ ಇರಲಿ ಗಮನ
ದಾರಿ ದೀಪದಂತೆ ಅವರು
ಹೊರೆಯೆಂಬ ಭಾವನೆ ಆಗಲಿ ಮನದೊಳಗಿಂದ ಶಮನ ll

No comments:

Post a Comment