Wednesday, December 07, 2016

ಮನಸ್ಸಿನಲ್ಲಿ ಮೆಣಸಿನ ಹವಾ!

ನಾನು ಚಿಕ್ಕವನಿದ್ದಾಗ ಕಿವಿ ನೋವು ಬಂದ ಕಾರಣ ಕ್ಕೆ ಮೆಣಸಿನ ಎಣ್ಣೆ ಬಿಟ್ಟ ನೆನಪು .ನನಗೆ ಒಬ್ಬನಿಗೆ ಅಲ್ಲ ಮನೆಮಂದಿಗೆ ಕಿವಿ ಸೋರುವುದು ಶುರುವಾದಗಾಲೂ ಬಳಕೆಯಾಗುತ್ತಿತ್ತು. ಆಂದಹಾಗೇ ಮೆಣಸಿನ ಎಣ್ಣೆ ತಯಾರು ಮಾಡುವುದಕ್ಕೂ ಪರಿಣತಿ ಇರಬೇಕು . ನನ್ನ ಅಜ್ಜಿ ಇರುವಾಗ ಇಂತಹ ಮದ್ದು ತಯಾರು ಮಾಡುತ್ತಿದ್ದರು . ಈಗ ಅನಿವಾರ್ಯ ಮತ್ತು ಅಗತ್ಯವಾಗಿ ವೈದ್ಯರನ್ನು ಕಾಣಲೇಬೇಕಾಗುತ್ತದೆ. ನಾನೀಗ ಹಳ್ಳಿ ಮದ್ದಿನ ಬಗ್ಗೆ ಹೇಳಲು ಹೊರಟ್ಟಿದ್ದು ಅಲ್ಲ . ಮೆಣಸಿನ ಬಗೆಗೆನ ಬೇರೆ ಬೇರೆ ಅನುಭವಗಳನ್ನು ಹಂಚಿಕೊಳ್ಳಲು!!

ಅಂದೊಮ್ಮೆ ನನ್ನ ಸ್ನೇಹಿತರೆಲ್ಲ ಸೇರಿ ಮದುವೆ  ಕಾರ್ಯಕ್ರಮದಲ್ಲಿ ಬಿಡುವಿನ ವೇಳೆಯಲ್ಲಿ ಕಾಯಿ ಮೆಣಸು ತಿನ್ನುವ ಸಣ್ಣ ಸ್ಪರ್ಧೆಯನ್ನು ಏರ್ಪಡಿಸಿದ್ದೆವು . ನಾನು ಕಷ್ಟ ಪಟ್ಟು ಹೇಗೋ ಐದು ಮೆಣಸು ತಿಂದೆ . ಖಾರ ಇಂದಿಗೂ ನೆನಪಾಗುತ್ತದೆ . ನನ್ನ ಮತ್ತೊಬ್ಬ ಸ್ನೇಹಿತ ಬರೋಬ್ಬರಿ ಹದಿನೈದು ಮೆಣಸು ತಿಂದ . ಅವನಿಗೆ ಇನ್ನೂರು ರೂಪಾಯಿ ಸಿಕ್ಕಿತು! ನಮ್ಮ ಮನೆಯಲ್ಲಿ ಹೆಚ್ಚು ಖಾರದ ಮೆಣಸು ಬಳಸದಿದ್ದರೂ ಅಪರೂಪಕ್ಕೆ ಬಳಕೆಯಾಗುತ್ತದೆ.


ಇನ್ನು ಕೆಲವೊಮ್ಮೆ ಮೆಣಸಿನ ಹುಡಿಯನ್ನು ಸಾಂಬಾರು ತಯಾರು ಮಾಡಲು ಉಪಯೋಗಿಸುವುದುಂಟು .
 ನಾನು ಒಂದು ಮದುವೆ  ಕಾರ್ಯಕ್ರಮಕ್ಕೆ ಮುಂಚಿತವಾಗಿ ಹೋಗಿದ್ದೆ . ಆಗ ನನಗೆ  ಹತ್ತು ವರ್ಷ .ಹೌದು  ನನ್ನ  ನೆಂಟರಿಷ್ಟರೆಲ್ಲ ಒಂದೆಡೆ ಸೇರಿ ಮೆಣಸಿನ ತೊಟ್ಟು ತೆಗೆಯುತ್ತಿದ್ದರು. ಅದು ಕೂಡ  ಒಂದೇ ನಮೂನೆಯ ಮೆಣಸಲ್ಲ . ಸಲ್ಪ ಕಪ್ಪು ,ಇನ್ನು ಕೆಲವು ತುಂಬಾ ಕೆಂಪು ,ಇನ್ನೂ ಕೆಲವು ಕುಂಬಳಕಾಯಿ ರೂಪ ಇರುವ ಮೆಣಸು...  ಹೀಗೆ ನಾಲ್ಕೈ ದು ಬಗೆಯ ಮೆಣಸನ್ನು ಮರುದಿನದ ಅಡುಗೆಗಾಗಿ ತಯಾರು ಮಾಡುತ್ತಿದ್ದರು .ಅದು ನೆನಪು ಮಾತ್ರ .ಯಾಕೆಂದರೆ ಈಗಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಈ ಸನ್ನಿವೇಶ ಕಾಣಸಿಗುವುದಿಲ್ಲ .ಎಲ್ಲವೂ ಯಂತ್ರಮಯ!.
ನಾನು ಆಳ್ವಾಸ್ ನುಡಿಸಿರಿ  ಗೆ ಹೋಗಿದ್ದೆ ಅನೇಕ ಪ್ರದರ್ಶನ ಗಳ ನಡುವೆ ತೋಟಗಾರಿಕೆ ಇಲಾಖೆಯ ವತಿಯಿಂದ ಬೇರೆ ಬೇರೆ ತರಕಾರಿಗಳ ಪ್ರದರ್ಶನವೂ ಇತ್ತು . ಅಲ್ಲಿ ಕೆಲವೊಂದು ಮೆಣಸುಗಳನ್ನು  ನೋಡಿ ನಾನು ಅಚ್ಚರಿಗೊಂಡೆ.ಯಾಕೆಂದ್ರೆ ಪರಿಚಯ ವಿಲ್ಲದ ಮೆಣಸಿನ ವಿಳಾಸ ಸಿಕ್ಕಿತು ಅದಕ್ಕೆ!. ಬ್ಯಾಡಗಿ ಮೆಣಸು ,ಗುಮ್ ಟುರ್ ಮೆಣಸು,ಬಳ್ಳಾರಿ ಮೆಣಸು,ಬೀದರ್ ಮೆಣಸು,ಗದಗ ಮೆಣಸು ,ಬಿರ್ದ ಮೆಣಸು ,ಹುಬ್ಬಳ್ಳಿ ಮೆಣಸು  ಒಟ್ಟಿನಲ್ಲಿ ಮೆಣಸಿನ ಲೋಕವೇ ಸರಿ. ಇದರ ಜೊತೆಗೆ ಜಗತ್ತಿನ ಖಾರದ ಮೆಣಸು ನೋಡಿದೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಮಾತು ನಿಜಕ್ಕೂ ಸತ್ಯ !
ನಾನು ಖಾರ ತಿನ್ನುವುದರಲ್ಲಿ ಸಲ್ಪ ಹಿಂದೆ. ಹಾಗೆಂದು ಮಾಂಸ ಪದಾರ್ಥ ಗಳು ಖಾರವೆ ಆಗಬೇಕು . ಅತಿ ಖಾರವನ್ನು ತಿನ್ನುವುದು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವುದನ್ನು ವೈದ್ಯರು ಆಗಾಗ ಹೇಳುತ್ತಿರುತ್ತಾರೆ . ಮೆಣಸನ್ನು ಹಳ್ಳಿ ಮದ್ದಿನಲ್ಲಿ ಕೂಡ  ಊಪಯೋಗ ಮಾಡುವ ಬಗ್ಗೆ  ನನ್ನ ಅಜ್ಜಿ ಹೇಳುತ್ತಿದ್ದರು . ಕೊಲೆಸ್ಟ್ರಾಲ್ ಕರಗಿಸುವಲ್ಲಿ ಮೆಣಸು ಹೆಚ್ಚಿನ ಪಾತ್ರವನ್ನು ಮಾಡುತ್ತದೆ . ಇನ್ನೂ ಚಟ್ನಿ ಮಾಡುವಾಗ ಕಾಯಿ ಮೆಣಸು ಹೆಚ್ಚಾಗಿ ಬಳಸುವುದನ್ನು ನಾವೆಲ್ಲರೂ ಗಮನಿಸಿದ್ದೇವೆ . ಅತೀ ಹೆಚ್ಚು ಖಾರ ಒಳ್ಳೆಯದಲ್ಲ ಖಾರದ ಜೊತೆ ಶುಂಠಿ, ಬೆಳ್ಳುಳ್ಳಿ ಇವುಗಳ ಕೂಡುವಿಕೆಯು ಇದ್ದರೆ ಚೆನ್ನ . ನನ್ನ ಈ  ಬರಹ ಖಾರವಾಗಿ ಇಲ್ಲದಿದ್ದರೂ ಖಾರ ಮೆಣಸಿನ ಬಗೆಗೆ ಆಲೋಚನೆ ಮಾಡುವಂತೆ ಪ್ರೇರೆಪಿಸಬಲ್ಲದೆ?





No comments:

Post a Comment