Wednesday, December 07, 2016

ಮಳಯಾಳಿಗರ ಮನೆಯಲ್ಲಿರುವ ವಿಶೇಷ ಅರೆಯುವ ಕಲ್ಲು

ಸಾಸಿವೆ ಇಲ್ಲದ ಮನೆ ಇಲ್ಲವೇ ಇಲ್ಲ. ಸಾಸಿವೆಯನ್ನು ಬಳಸದೆ ಮಾಡುವ ಅಡುಗೆಯೂ ಇಲ್ಲ  ಇದು ಎಲ್ಲರೂ ಹೆಳುವ ಮಾತು ಹಾಗೆಯೇ  ಅರೆಯುವ ಕಲ್ಲು ಇಲ್ಲದ ಮನೆಯೂ ಇಲ್ಲ! ಹೌದು ದಿನನಿತ್ಯದ ರುಚಿಕರ ಪದಾರ್ಥ ರಡಿ ಮಾಡಲು  ಅರೆಯುವ ಕಲ್ಲು ಬೇಕೆ ಬೇಕು .ಅರೆಯುವ ಕಲ್ಲಿಗೆ ಇರುವ ಮತ್ತೊಂದು ಹೆಸರು ಅಮ್ಮಿಕಲ್ಲು ಅಥವಾ ಅಸಿಗಲ್ಲು. ನಮ್ಮ ತುಳುವರು ಕಡೆಪಲ್ ,ಕಡೆಪಿಕಲ್ಲ್ ಎಂದೂ ಕರೆಯುವುದುಂಟು. ಅನೇಕ ಮನೆಗಳಲ್ಲಿ  ವೃತ್ತಾಕಾರದ ಕಲ್ಲುಗಳೇ  ಇವೆ . ನಮ್ಮ ಮನೆಯಲ್ಲಿ  ದೊಡ್ಡದಾದ ಅರೆಯುವ ಕಲ್ಲು ಇದ್ದು ,ಅಪರೂಪಕ್ಕೆ ಅದರಲ್ಲಿ ಮಸಾಲೆ ಅರೆಯುತ್ತೇವೆ .ಅಂದೊಮ್ಮೆ ನಾನು ಅರೆಯುವ ಕಲ್ಲಿನಲ್ಲಿ  ಮೆಣಸು ಕಡೆದು ಕಣ್ಣಿಗೆ ರಟ್ಟಿಸಿಕೊಂಡು ಜೋರು ಅತ್ತಿದ್ದೆ . ಮತ್ತೊಮ್ಮೆ ದೋಸೆಗೆ ಇಟ್ಟು ಕಡೆಯುವ ಸಮಯದಲ್ಲಿ ಮೈ ತುಂಬಾ ಮತ್ತು ಮನೆ ಗೋಡೆ ತುಂಬಾ ಬಿಳಿ ಬಿಳಿ ಚಿತ್ತಾರ ಬಿಡಿಸಿಟ್ಟು ಅಮ್ಮನ ಕೈಯಿಂದ ಪೆಟ್ಟುತಿಂದ ನೆನಪು ಇನ್ನೂ ಜೀವಂತ! ಮತ್ತೊಂದು ನೆನಪಿನ ಘಟನೆಯೆಂದರೆ ಅರಸಿನ ಕೊಂಬು ಗುದ್ದುವಾಗ  ನನ್ನ ಬೆರಳಿಗೂ  ಗುದ್ದಿಕೊಂಡಿದ್ದೆ .ಅದೆಲ್ಲವೂ ಈಗ ಇರಲಿ ,ಮೊನ್ನೆ ನನ್ನ ಸ್ನೇಹಿತನ ಮನೆಗೆ ಹೋಗಿದ್ದೆ ಅಲ್ಲಿ ಇದ್ದದ್ದು  ವೃತ್ತಾಕಾರದ  ಕಲ್ಲಲ್ಲ  ಬದಲಾಗಿ ಚೌಕಕಾರದ ಕಲ್ಲು .

ಹೌದು ಕೇರಳದಿಂದ ಬಂದಿರುವ ಮಳಯಾಳಿಗರ ಮನೆಯಲ್ಲಿ ಒಂದು ವಿಶೇಷವಾದ  ಅರೆಯುವ ಕಲ್ಲು ಇದೆ. ಕಲ್ಲಿನಲ್ಲಿ ಕುಳಿತುಕೊಂಡು ಮಸಾಲೆ ಅರೆಯೋದು ಸಲ್ಪ ಕಷ್ಟ . ಹಾಗಾಗಿ ಬಟ್ಟೆ  ಹೊಗೆಯುವ ರೀತಿಯಲ್ಲಿ ನಿಂತು ಕೊಂಡು ಮಸಾಲೆ ಅರೆಯಲು ಬಹಳ ಸುಲಭ ವಾಗುತ್ತದೆ . ಎಲ್ಲರ ಮನೆಯಲ್ಲಿ ಅರೆಯುವ ಕಲ್ಲು ಮನೆಯೊಳಗೆ ಇದ್ದರೆ ಮಳಯಾಳಿಗರ ಮನೆಯಲ್ಲಿ ಮಾತ್ರ ಮನೆಯ ಹಿಂದುಗಡೆ ಇರುತ್ತದೆ .


ಮಳಯಾಲಿಗರ ನಿತ್ಯದ ಆಹಾರದಲ್ಲಿ ಮುಂಜಾನೆ ಮರಗೆಣಸಿನ ಜೊತೆಗೆ ಮೊಸರನ್ನು ಸೇರಿಸಿ ಖಾರವಾದ ತಿನಸನ್ನು ಇದರಲ್ಲಿಯೇ  ತಯಾರಿಸುತ್ತಾರೆ .ಮತ್ತೆ  ಅರೆಯುವ ಕಲ್ಲಿನಲ್ಲಿ ಮಾಡುವ ಚಟ್ನಿಯನ್ನು ಒಮ್ಮೆ ನೆನೆದರೆ ಹಾಗೆಯೇ ಒಮ್ಮೆ ಬಾಯಲ್ಲಿ ನೀರು ಬಂದು ಬಿಡುತ್ತದೆ . ಹೆಚ್ಚಿನ ಮಸಾಲೆಯನ್ನು ಇವರು ಚೌಕಕಾರದ  ಕಲ್ಲಿನಲ್ಲಿಯೇ ಅರೆಯುತ್ತಾರೆ . ಈಗ ಬಹುತೇಕ ಮನೆಗಳಲ್ಲಿ (ನಮ್ಮ ಮನೆಯೂ ಸೇರಿದಂತೆ )ಅರೆಯುವ ಕಲ್ಲು  ಉಪಯೋಗ ಮಾಡುವವರು ಕಡಿಮೆ 
.ಮತ್ತೊಂದು ವಿಷಯವೆಂದೆರೆ , ಅಂದಿನ ಮದುವೆ ಮನೆಗಳಲ್ಲಿ  ಪಕ್ಕದ ಮನೆಯ ವರ ಅರೆಯುವ ಕಲ್ಲುಗಳನ್ನು ತಂದು ಒಂದೆಡೆ ಸಾಲಾಗಿ ಜೋಡಿಸಿ ಅದರಲ್ಲಿ ಮಸಾಲೆ ತಯಾರು ಮಾಡುತ್ತಿದ್ದ  ಸಂದರ್ಭ ಈಗ ನೆನಪಾಗಿ ಮಾತ್ರ ಉಳಿದಿದೆ . ಮದುವೆ ಮನೆಯಲ್ಲಿ ಅರೆಯುವ ಕಲ್ಲಿನಲ್ಲಿ ಕಡೆಯುವಾಗ ಅಪರಿಚಿತರು ಪರಿಚಿತರಾಗುತ್ತಿದ್ದರು .ಆಷ್ಟೇ ಅಲ್ಲ, ಪ್ರೀತಿಯು ಶುರುವಾಗುತ್ತಿತ್ತು !ನಮ್ಮ ತುಳುವರು ಅರೆಯುವ ಕಲ್ಲಿಗೆ ಕಲ್ಲುಕುಟ್ಟಿ ಹಾಕಲು ಬರುವವರನ್ನು "ಕಲ್ಲುಳಿ ಪಾಡುನಾಯೆ "ಎಂಬುದಾಗಿ ಕರೆಯುತ್ತಾರೆ.ಅರೆಯುವ ಕಲ್ಲು ಈಗ ಒಂದು ತೋರಿಕೆಯ  ವಸ್ತುವಾಗಿ ಉಳಿದಿದೆ . ಈಗ ವಿದ್ಯುತ್  ಚಾಲಿತ ಯಂತ್ರಗಳು ಬಂದು ಬಿಟ್ಟಿವೆ .

No comments:

Post a Comment