Friday, February 24, 2017

ಮುದ್ದಿನ ಸ್ಟೇಟಸ್ಸೆ...ನಿನೇಕೆ ಮರೆಯಾದೆ...?!

ತಮ್ಮ ದಿನಚರಿಯನ್ನು ಕ್ರಮಬದ್ದವಾಗಿ ಡೈರಿಯಲ್ಲಿ ಬರೆದಿಡುವ ಒಂದು ಕಾಲವಿತ್ತು  .ಕಾಲ ಕಾಲಕ್ಕೆ ಅದನ್ನು  ನೋಡಿ ಮೆಲುಕು ಹಾಕುವುದು. ತನ್ನ ಮನಸಿನ ಭಾವ ಮತ್ತು ನಡೆದ ಸತ್ಯ ಸಂಗತಿಗಳು ಅಕ್ಷರ ರೂಪದಲ್ಲಿ ದಾಖಲು ಮಾಡುವುದು ದಿನದ ಕೆಲಸವೂ ಆಗಿತ್ತು. ಅದೆಲ್ಲವನ್ನು ಸದ್ದಿಲ್ಲದೆ ನುಂಗಿ ಹಾಕಿದ್ದು  ಸಾಮಾಜಿಕ ಜಾಲತಾಣಗಳು.( ಕೆಲವರು ಈಗಲೂ ಬರೆಯುತ್ತಿರಬಹುದು) ಇದರಲ್ಲಿ ಮುಖ್ಯವಾಗಿ ವಾಟ್ಸಪ್ ವಿಶೇಷ ಪಾತ್ರವನ್ನು ವಹಿಸಿದೆ .ಬೆಳಿಗೆದ್ದು ಯಾರ ಮುಖವ ನಾನು ನೋಡಲಿ ಎಂದು ಹಾಡುವ ಜಾಯಮಾನದ ಮನಸುಗಳು! ಬೆಳಿಗ್ಗೆ ಎದ್ದೇಳುವ ಚಿತ್ರ, ಹಲ್ಲು ಉಜ್ಜುವ ಚಿತ್ರ, ಕಾಫಿ ಕುಡಿಯುವ ಚಿತ್ರ, ದಾರಿಯಲ್ಲಿ ನಡೆದು ಕೊಂಡು ಹೋಗುವ ಚಿತ್ರ, ದಾರಿ ಮಧ್ಯೆ ಹೊಸಬರು ಸಿಕ್ಕಾಗ ಇನ್ನೊಂದು ಚಿತ್ರ, ಕಾಲೇಜು ಅಥವಾ ಆಫಿಸಿನಲ್ಲಿ ಒಂದು ಚಿತ್ರ.... ಹೀಗೆ ಪಟ್ಟಿ ದೊಡ್ಡದು. ಒಟ್ಟಿನಲ್ಲಿ ತಾಂತ್ರಿಕವಾಗಿ   ದಿನದ ದಿನಚರಿ ದಾಖಲಾಗುತ್ತಾ ಇರುತ್ತದೆ.  ಇದು ಬರೇ ಡಿ.ಪಿ ಎಂದುಕೊಳ್ಳುವ ವಿಷಯಕ್ಕೆ ಆಯ್ತು. ಇನ್ನೂ ಸ್ಟೇಟಸ್ ಬಗ್ಗೆ ಬರೆಯಲೇ ಬೇಕು .ಸಂತೋಷ ದಿಂದ ಇದ್ದರೆ, ದುಖದಿಂದ ಇದ್ದಾಗ ಪ್ರೀತಿಯಲ್ಲಿ ಬಿದ್ದಾಗ, ಮುನಿಸುಕೊಂಡೆರೆ ಹೀಗೆ ಹಲವು ಆಯಾಮಗಳಲ್ಲಿ ಸಿಂಬಲ್ ಮತ್ತು ಕೆಲವೇ ವಾಕ್ಯಗಳಲ್ಲಿ ತಮ್ಮ ಸಂಪರ್ಕದಲ್ಲಿ ಇರುವವರಿಗೆ ಬರಹಗಳು ಕಾಣುತ್ತದೆ.
ಹಳೆಯ ವಾಟ್ಸಪ್ ಸ್ಟೇಟಸ್
ಸಾಕಷ್ಟು ಸ್ಟೇಟಗಳು ಒಬ್ಬರೊನೊಬ್ಬರು ಮೀರಿಸುವಂತೆ ಇರುತ್ತವೆ. ಕೆಲವರು ಕವನದ ಸಾಲುಗಳನ್ನು ಹಾಕಿರುತ್ತಾರೆ .ಕೆಲವರು ಪ್ರೇಮ ಅಮಲಿನಲ್ಲಿ ಬರೆದ ವಾಕ್ಯಗಳು ಅಥವಾ ಸ್ಟೇಟಸ್ ನೋಡಿಯೇ  ಪ್ರೀತಿಯು ಉಕ್ಕಿ ಬರುವಂತೆ ಬರೆಯುವವರೂ ಇದ್ದಾರೆ. !! ಕೆಲವು ಸಲ ಮತ್ತೊಬ್ಬರ ಸ್ಟೇಟಸ್ ಬಗ್ಗೆ ಗಂಭೀರ ಚರ್ಚೆಗಳು ನಡೆಯುತ್ತವೆ.ಈಗ ಸಾಕಷ್ಟು ಸಂಖ್ಯೆಯಲ್ಲಿ ಗುಂಪುಗಳು ಹುಟ್ಟಿಕೊಂಡ ಕಾರಣದಿಂದ ಹೊಸಬರು ಪರಿಚಯವಾಗುತ್ತಾರೆ. ಕೆಲವರು ಸ್ನೇಹಿತರಾಗುತ್ತಾರೆ. ಇನ್ನೂ ಕೆಲವರು ಪ್ರೇಮಿಗಳಾಗುತ್ತಾರೆ! ಕೆಲವೊಮ್ಮೆ ಹುಡುಗ  ಹುಡುಗಿಗೆ ಸ್ಟೇಟಸ್ ಚೇಂಜ್ ಮಾಡು ಡಿ.ಪಿ ಬದಲಾಯಿಸು ಎಂದು ಹೇಳಿದ ಎಷ್ಟೋ ಉದಾಹರಣೆ ಗಳಿವೆ. ಪ್ರೀತಿ, ಪ್ರೇಮದ ವಿಧಾನಗಳು ಬದಲಾಗಿವೆ. ಪ್ರೀತಿಯನ್ನು ಹೇಳಿಕೊಳ್ಳುವುದರಲ್ಲೂ ಸ್ವಲ್ಪ ಭೀನ್ನವಾಗಿದೆ. ಪ್ರೀತಿ ಮಾಡಿಕೊಳ್ಳುವುದಕ್ಕೆ  ಈಗ ಪಾರ್ಕ್, ದೇವಸ್ಥಾನ,ಬೀಚು ಸಿನೆಮಾ ಥೀಯೆಟರ್ ಸೇರಿಂದಂತೆ ಯಾವುದೇ ಲವರ್ಸ್ ಸ್ಪಾಟ್ ಗಳ ಅಗತ್ಯವಿಲ್ಲ, ಅಂಗೈಯಲ್ಲೊಂದು ಫೋನ್ ಇದ್ದರೆ ಸಾಕು ಎಲ್ಲವೂ ಸ್ಟೇಟಸ್ ನಲ್ಲಿ ಮತ್ತು ಡಿ.ಪಿ ಯಲ್ಲಿ ಸುಧಾರಿಸುವ ಕಾಲ!! ಎಷ್ಟೋ ಸಲ ಡಿ.ಪಿ  ಮತ್ತು ಸ್ಟೇಟಸ್ ಗೆ ಸಂಬಂಧ ವೇ ಇರುವುದಿಲ್ಲ.  ಸ್ವಲ್ಪ ಜನ ವಾರಕೊಮ್ಮೆ, ತಿಂಗಳಿಗೊಮ್ಮೆ  ಸ್ಟೇಟಸ್ ಬರೆದರೆ, ಯುವ ಮನಸುಗಳು ನಿಮಿಷಕೊಮ್ಮೆ ಏನಾದರೂ ಬರೆಯುತ್ತಿರುತ್ತಾರೆ.  ಇದಕ್ಕೆ ನಾನು ಹೊರತಲ್ಲ! ಆದರೆ ಕೆಲವರಿಗೆ ಕುತೂಹಲ  ಇನ್ನೂ ಹಲವರಿಗೆ ಅನುಮಾನ ಅನೇಕರಿಗೆ ಈ ಸ್ಟೇಟಸ್ ಗಳು ತಮಾಷೆ ಸುದ್ದಿಯೂ ಆಗಿರುತ್ತದೆ.  ಬದಲಾವಣೆ ಜಗದ ನಿಯಮ  ಎನ್ನುವ ಮಾತು ನಾವು ಆಗಾಗ ಕೇಳುವ ಮಾತು.ಇದು ಬೇರೆ ಬೇರೆ ಕ್ಷೇತ್ರ ಕ್ಕೆ ಅನ್ವಯಿಸುತ್ತದೆ. ಮಾತನ್ನು ಈಗ ವಾಟ್ಸಪ್  ಸ್ಟೇಟಸ್ ನ ವಿಚಾರಕ್ಕೂ ಸಮೀಕರಿಸಿ ನೋಡಬೇಕೇಕಿದೆ. ಈಗ ಸಿಂಗಲ್ ಲೈನ್ ನಲ್ಲಿ ಸ್ಟೇಟಸ್ ಬರೆಯುವ ಕಾಲ ಹೋಯ್ತು .ವಾಟ್ಸ್ಆಪ್ ಬಳಕೆದಾರರು ತಮ್ಮ ಪರಿಚಯ ಇರುವ ಸ್ನೇಹಿತ ವರ್ಗಕ್ಕೆ  ಕಾಣುವಂತೆ ಫೋಟೋಗಳು ಹಾಗೂ ವೀಡಿಯೋಗಳನ್ನು ತಮ್ಮ ಸ್ಟೇಟಸ್ನಲ್ಲೇ ಅಪ್ ಲೋಡ್ ಮಾಡಲು ಅನುವು ಮಾಡಿಕೊಡುವಂತಹ ಹೊಸ ವಾಟ್ಸ್ಆಪ್ ಫೀಚರ್ ಬಂದಿದೆ .ಇದರಿಂದ ಕೆಲವರಿಗೆ ಬೇಸರ ಹಲವರಿಗೆ ಸಂತೋಷ.
ಹೊಸ ವಾಟ್ಸ್ ಪ್ ಸ್ಟೇಟಸ್
  ಬದಲಾವಣೆಗಳು  ಆಂಡ್ರಾಯ್ಡ್, ಐಒಎಸ್ ಹಾಗೂ ವಿಂಡೋಸ್ ಸ್ಮಾರ್ಟ್ ಫೋನುಗಳಲ್ಲಿ ಲಭ್ಯವಿದೆ. ಹೊಸದಾಗಿ ಯಾರು ಕೂಡ ಫೀಚರನ್ನು  ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ ಅಪ್ ಡೇಟ್ ಮಾಡಬೇಕಿಲ್ಲ, ಅದು ಆಪ್ ನಲ್ಲೆ  ಲಭ್ಯವಿದೆ. ಐಒಎಸ್ ಗಳಲ್ಲಿ ಸ್ಟೇಟಸ್ ಸ್ಕ್ರೀನಿನ ಎಡ ತುದಿಯಲ್ಲಿ ತನ್ನದೇ ಆದ ಟ್ಯಾಬ್ ಇದೆ. ಅದರ ನಂತರ ಕಾಲ್ಸ್, ನಂತರ ನಡುವೆ ಕ್ಯಾಮರಾ, ನಂತರ ಚ್ಯಾಟ್ ಹಾಗೂ ಸೆಟ್ಟಿಂಗ್ ಗಳಿವೆ.  ಆಂಡ್ರಾಯ್ಡ್ ಫೋನುಗಳಲ್ಲಿ ಕ್ಯಾಮೆರಾ, ಚ್ಯಾಟ್ಸ್ ಸ್ಟೇಟಸ್ ನಂತರ ಕಾಲ್- ಕ್ರಮಾಂಕದಲ್ಲಿ ಟ್ಯಾಬ್ ಗಳಿರುತ್ತವೆ. ಕೇವಲ ವಾಕ್ಯಗಳನ್ನು ತಮ್ಮ ಸ್ಟೇಟಸ್ ನಲ್ಲಿ ಹಾಕುವುದಕ್ಕಿಂತ ಇನ್ನು ಮುಂದೆ ವಾಟ್ಸ್ ಆಪ್ ಬಳಕೆದಾರರು ತಮ್ಮ ಕಾಂಟ್ಯಾಕ್ಟ್ ಗಳಿಗೆ ತಮಗಿಷ್ಟವಾದ ಫೋಟೋ ಅಥವಾ ವೀಡಿಯೊ ತೋರಿಸಬಹುದು. ಆದರೆ ಇವುಗಳು ಕೇವಲ 24 ಗಂಟೆಗಳ ತನಕ ಮಾತ್ರ ಲಭ್ಯವಿದ್ದು ನಂತರ ಕಾಣಿಸುವುದಿಲ್ಲ.ಹಿಂದೆ ಇದ್ದ ಸಿಂಗಲ್ ಲೈನ್ ವಾಕ್ಯ ರೂಪದ ಸ್ಟೇಟಸ್ ಗೆ ಮರು ಉತ್ತರಿಸುವ ಆಯ್ಕೆ ಇರಲಿಲ್ಲ ಆದರೆ  ಈಗ ಒಬ್ಬರ ಸ್ಟೇಟಸ್ ಅಪ್ ಡೇಟ್ ಗೆ ರಿಪ್ಲೈ ಮಾಡುವ ಆಪ್ಶನ್ ಕೂಡ ಇದೆ. ನಿಮ್ಮ ಕಾಂಟ್ಯಾಕ್ಟ್ ಗಳು ಕಾಣಿಸುವಲ್ಲಿ ನೀಲಿ ವೃತ್ತಗಳಿದ್ದರೆ ಅವರ ಸ್ಟೇಟಸ್ ಅಪ್ ಡೇಟ್ ಇದೆಯೆಂದು ಅರ್ಥ.  ಸ್ಟೇಟಸನ್ನು ಮತ್ತೊಬ್ಬರ ಜೊತೆ ಹಂಚಿಕೊಳ್ಳಲು ಸಾಧ್ಯವಿದೆ .ಸಾಮಾಜಿಕ ಜಾಲತಾಣದಲ್ಲಿ  ಸ್ಟೇಟಸ್ ಬದಲಾದರೂ ನಿತ್ಯ ಜೀವನದಲ್ಲಿ ನಮ್ಮ ಸ್ಟೇಟಸ್ ಗೆ ಧಕ್ಕೆ ಬಾರದಿರಲಿ


No comments:

Post a Comment