Wednesday, March 08, 2017

ಯಶೋಗಾಥೆ… ಇದು ಯಶೋಧೆಯ ಕತೆ

 ಇಂದು ವಿಶ್ವ ಮಹಿಳೆಯರ ದಿನ. ಇದು ಮಹಿಳೆಯರ ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮತ್ತು ಹೆಣ್ಣಿನ ಜೀವನ ಪಥ ಬದಲಾದ ಸಂಕೇತ ದಿನವೂ ಕೂಡ. ಸಬಲ, ವಿದ್ಯಾವಂತ, ಅಭಿವೃದ್ಧಿಶೀಲ ಮಹಿಳಾ ಸಮಾಜದಿಂದ ಮಾತ್ರ ಸಮಾಜದ ಉನ್ನತಿ ಸಾಧ್ಯವಾಗದು. ಬದುಕನ್ನು ಸವಾಲಾಗಿ ಸ್ವೀಕರಿಸಿ  ಮಾದರಿಯಾದ  ಹೆಣ್ಣಿನಿಂದಲೂ ಸಮಾಜ ಬದಲಾಗಬಹುದು ಮತ್ತು ಜೀವನ   ಪಾಠವನ್ನು ಕಲಿಯಬಹುದು
  ಈ ಹಿನ್ನೆಲೆಯಲ್ಲಿ ನನ್ನ ಬರಹ   ➤➤ವಿ.ಕೆ ಕಡಬ
ಮಹಿಳೆಯ ಮಮತೆ ಹಾಗೂ ತ್ಯಾಗಮಯ ಬದುಕು  ಎಲ್ಲರಿಗೂ ಆದರ್ಶಮಯವಾಗಿರುವ ಅನೇಕ ನಿದರ್ಶನಗಳಿವೆ.
 ಉದ್ಯೋಗ ಅಥವಾ ವಾಸಿಸುವ ಸ್ಥಳದಲ್ಲಿ ನೋವಿನ ಅನುಭವಗಳೆ ಹೆಚ್ಚುಅದು ಅವರು ಅನುಭವಿಸುವ ಯಾತನೆಗಳ ಬಗ್ಗೆ
 ಕೆದಕಿದಾಗ ಮಾತ್ರ  ಬಹಳ ಆತಂಕಕಾರಿಯಾದ ಮಾಹಿತಿ ಅನಾವರಣಗೊಳ್ಳುತ್ತದೆಸಾಧನೆಯ ಹಾದಿಯಲಿ ಸಾಗಿದ ಮಹಿಳೆಯರ  ಹಿಂದೆ  ಮಾನಸಿಕ ಒತ್ತಡ,,ದೈಹಿಕ ಹಾಗೂ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳಗಳ ಕತೆ ಅಡಗಿರುತ್ತದೆಯೆಂದು ಹೆಚ್ಚಿನವರಿಗೆ ಅರಿವಿರುವುದಿಲ್ಲಇದು ಎಲ್ಲಾ ವರ್ಗದ ಮಹಿಳೆಯರಿಗೆ ಅನ್ವಯಿಸುತ್ತದೆ ಎಂಬುದು ಮಾತ್ರ ನೋವಿನ ಸಂಗತಿ. ನಾನು ಈಗ ಹೇಳ ಹೊರಟಿರುವುದು ಸತ್ಯ ಸಂಗತಿಯೇ ಹೊರತು ಕಾಲ್ಪನಿಕ ಕತೆಯಲ್ಲ. ಈಕೆಯ ಹೆಸರು ಯಶೋಧ ವಾಮಂಜೂರು. ಮೂಲತ: ಪುತ್ತೂರು ತಾಲೂಕಿನ ಬೆಟ್ಟಂಪಾಡಿಯಲ್ಲಿ ಇವರ ಮೂಲ ನಿವಾಸ. ಎಳೆ ವಯಸ್ಸಿನಲ್ಲೆ ತನ್ನ ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡ ಇವರಿಗೆ ಎಡ ಕಣ್ಣು ಮಾತ್ರ ಕಾಣುತಿತ್ತು .

ಆ ಸಮಯದಲ್ಲಿ ಮಂಗಳೂರಿನ ವೆನ್ಲಾಕ್ ನ ವೈಧ್ಯರಲ್ಲಿ ತೋರಿಸಿದಾಗ ಹದಿನೆಂಟು ವರ್ಷ ಆಗುವಾಗ ಇನ್ನೊಂದು ಕಣ್ಣು ಹೋಗುವ ಸಂಭವ ಇದೆ ಆದಷ್ಟು ಬೇಗ ಚಿಕಿತ್ಸೆ ಮಾಡುವಂತೆ ಸೂಚಿಸಿದ್ದರು. ಆದರೆ ಆರ್ಥಿಕ ಕಾರಣದಿಂದ ಯಾವುದೇ ವೈಧ್ಯಕೀಯ ಸೇವೆಯನ್ನು ಪಡೆಯಲು ಸಾಧ್ಯವಾದೆ ಹೋಯಿತು. ಈ ಕಷ್ಟಕರ ಬದುಕಿನಲ್ಲಿ ಇವರ ದೊಡ್ಡಮ್ಮ  ಬದುಕಿಗೆ ಆಸರೆಯಾದರು. ಹಳ್ಳಿ ಬದುಕಿನ ಅನುಭವ ಇರುವ ಈಕೆ ತನ್ನ ದೊಡ್ಡಮ್ಮನ ಜೊತೆ ಅನಿವಾರ್ಯವಾಗಿ ಕೆಲಸಕ್ಕೆ ಹೋಗಬೇಕಾಯಿತು. ಈಕೆಯ ದೊಡ್ಡಮ್ಮ ಮತ್ತೊಬ್ಬರ ಮನೆಯ ಮಗುವಿನ ಚಾಕ್ರಿ ಮಾಡಲು ಕಳುಹಿಸಿದರು. ಅದೂ ದೈನಕ್ಕೆ 5 ಪೈಸೆಗೆ ! ದುಡಿದ ದುಡ್ಡೆಲ್ಲವೂ ದೊಡ್ಡಮ್ಮನಿಗೆ.ಈಕೆಯ ಪಾಲಿಗೆ ಬದುಕು ಕಾಣದ ಕಡಲು. ಆ ಬಳಿಕ ಗದ್ದೆಯಲ್ಲಿ  ನೇಜಿ ಕೆಲಸಕ್ಕಾಗಿ ದಿನಕ್ಕೆ ಒಂದು ಪಾವು ಅಕ್ಕಿಗಾಗಿ ದುಡಿದು,ಇದರ ಜೊತೆಗೆ  ತೆಂಗಿನ ಕಾಯಿ ಸುಳಿಯುವುದು ಹೀಗೆ ಅನೇಕ ರೀತಿಯಲ್ಲಿ ತುತ್ತಿಗಾಗಿ ದುಡಿತ. ಆ ಸನ್ನಿವೇಶವನ್ನು ಕಣ್ಣೀರು ಸುರಿಸುತ್ತಲೆ ಹೇಳಿದಾಗ ನನ್ನ ಕಣ್ಣಂಚಿನಲ್ಲಿಯೂ ಕಂಬನಿ. ಹೀಗೆ ಮೂರು ವರ್ಷ ನೋವಿನ ಜೀವನದಲ್ಲೆ ಕಾಲ ಕಳೆದರು .ಹಿಂದೆ ಮುಂದೆ ಸರಿಯಾಗಿ ದಿಕ್ಕು ದೆಸೆ ಇಲ್ಲದ ಯಶೋಧರವರು 13 ವರ್ಷ ಪ್ರಾಯದಲ್ಲೆಯೆ ಮದುವೆಗೆ ಒಪ್ಪಿಕೊಳ್ಳಬೇಕಾಯಿತು.ಆ ಬಳಿಕ  ತನ್ನ ಹದಿನೈದನೇ ವಯಸ್ಸಿಗೆ ಹೆಣ್ಣು ಮಗುವಿಗೆ ತದ ನಂತರ ಒಂದು ಗಂಡು ಮಗುವಿಗೆ ಜನ್ಮವಿತ್ತರು. ಬದುಕಿನ ದುರಂತ ಎಂಬಂತೆ ಡಾಕ್ಟರ್ ಹೇಳಿದ ಮುನ್ಸೂಚನೆಯಂತೆ 17ನೇ ವಯಸ್ಸಿಗೆ ಕಾಣುತ್ತಿದ್ದ ಬಲ ಕಣ್ಣು ದೃಷ್ಟಿ ಕಳೆದುಕೊಂಡಿತು. 
ಈಗ ಬದುಕು ಪೂರ್ತಿ ಕತ್ತಲು. ಜೀವನ ಹೇಗಿರಬಹುದು ಎಂದು ಊಹಿಸಲು ಅಸಾಧ್ಯ.ಈ ವಿಷಯವನ್ನು ಗಮನಿಸಿ ಸಿಸ್ಟರ್ ಇವ್ಯಾಂಜಿಲಿಯನ್ ಸಹಾಯಕ್ಕೆ ಬಂದರು .ಇವರ ಸಹಾಯದಿಂದ ಸಂತ ಜೋಸೆಫ್ ಪ್ರಾನ್ಸಿಸ್ ವಾಸ್ ಆಶ್ರಮಕ್ಕೆ ಸೇರಿದರು..ಅಲ್ಲಿ ತನ್ನ ಮಕ್ಕಳ ಜೊತೆ ಬದುಕಬೇಕಾಯಿತು. ಮಕ್ಕಳನ್ನು ಸಿಸ್ಟರ್ ಇವ್ಯಾಂಜಿಲಿಯನ್ ನೋಡಿಕೊಳ್ಳುವುದಾಗಿ ಒಪ್ಪಿಕೊಂಡರು.ಅದೇ ಸಮಯದಲ್ಲಿ ಸುಗುಣ ಎನ್ನುವವರ ಕೋರಿಕೆಯಂತೆ ಅಂಧರ ಚಲನವಲನ ಕೇಂದ್ರದಲ್ಲಿ ತರಬೇತಿಗೆ ಬರುವಂತೆ ಒತ್ತಾಯಿಸಿದರು. ಅಲ್ಲಿ ಶ್ವೇತ ಬೆತ್ತದ ಹಿಡಿದು ನಡೆಯುವ ,ವಾಹನದಲ್ಲಿ ಹೋಗುವ , ಹಣದ ಲೆಕ್ಕಚಾರ ಮಾಡುವ ಬಗೆ  ಜೊತೆಗೆ ಮೇಟ್, ಪೇಪರ್ ಕವರ್ ತಯಾರಿಸುವ ಬಗೆಗೆ ತರಬೇತಿಯನ್ನು ನೀಡಿದರು. ಈಕೆಯ ಮಗಳು ಶಾಲೆಯಿಂದ ಬಂದು ಬೀಡಿ ಕಟ್ಟುತ್ತಿದ್ದಳು. ಮೂರನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ ಮಗಳನ್ನು ಸಿಸ್ಟರ್ ಇವ್ಯಾಂಜಿಲಿಯನ್ ತಾನು ಓದಿಸುವುದಾಗಿ ಹೇಳಿ ಇಂಗ್ಲಿಷ್ ಮಾಧ್ಯಮಕ್ಕೆ ಕಳುಹಿಸಿದರು .ಆ ಬಳಿಕ ಮಗಳನ್ನು ಸಿಸ್ಟರ್ ಉನ್ನತ ವ್ಯಾಸಂಗ ಮಾಡಿಸಿದರು. ಆಕೆಯ ಬದುಕಿನಲ್ಲಿ ಹೊಸ ತಿರುವು ಸಿಕ್ಕಿ ಈಗ ಆಕೆ ಬೆಂಗಳೂರಿನ  ಹೆಸರಾಂತ ಆಸ್ಪತ್ರೆಯಲ್ಲಿ ಡಾಕ್ಟರ್ ಆಗಿದ್ದಾರೆ. ತಾನು ಓದದಿದ್ದರೂ,ಓದಿಸಲಾಗದಿದ್ದರೂ ಬೇರೆಯವರ ಸಹಾಯದಿಂದ ಮಗಳು ಉತ್ತುಂಗ ಶಿಖರಕ್ಕೆ ಏರಿದ ಸಂತೋಷವನ್ನು ಖುಷಿಯಿಂದ ಹಂಚಿಕೊಳ್ಳುವ ಪರಿಯೇ ಬೇರೆ .ಮಗಳಿಗೆ ಈಗ ಮದುವೆಯೂ ಆಗಿದ್ದು, ಮೊಮ್ಮಗಳನ್ನು ಕಾಣುವ ಭಾಗ್ಯ ಇಲ್ಲದಿದ್ದರೂ ಮುಟ್ಟಿ ಸಂತೋಷ ಪಡುವೆ ಎಂದಾಗ ಮನಸು ಒಮ್ಮೆ ಕರಗುತ್ತದೆ.ಮಗಳು ಅಳಿಯ ಸಮಯ ಬಂದಾಗಲೆಲ್ಲ ವಿಚಾರಿಸಿಕೊಂಡು ಹೋಗುತ್ತಾರೆ.
ಮಗ ಕಾಲೇಜು ಓದುತಿದ್ದಾನೆ. ಯಾರ ಹಂಗಿನಲ್ಲಿ ಇರದೇ ಸ್ವ ಉದ್ಯೋಗ ಮಾಡಿ ಬದುಕುವುದೇ ದೊಡ್ದ ಸಂತೋಷ ಎನ್ನುತ್ತಾರೆ. ಇವರ ದಿನಚರಿ ನಮಗೆಲ್ಲ ಮಾದರಿ. ಎಂದಿನಂತೆ ನಾಲ್ಕು ಗಂಟೆಗೆ ಇವರ ಮನೆ ಕೆಲಸ ಶುರುವಾಗುತ್ತದೆ. ಬೆಳಗ್ಗಿನ ಕಾಫಿ,ಅನ್ನ,  ಮತ್ತು  ನೀರು ತುಂಬಿಸುವ ಕೆಲಸ ಯಾವುದೇ ಹೆದರಿಕೆಯಿಲ್ಲದೆ ಮಾಡುತ್ತಾರೆ .ಕೆಲವೊಮ್ಮೆ ತನ್ನ ಗಂಡನ ಸಹಾಯವನ್ನೂ ಪಡೆಯುತ್ತಾರೆ. ಸದಾ ನಗುಮೊಗದಿಂದ ಇರುವ ಇವರು ಅಂದ ಕಲಾವಿದೆ ಎಂದರೆ ತಪ್ಪಾಗಲಾರದು.ನೀಜಿದ ಕಬಿತೆಗಳು,ಜನಪದ ಹಾಡುಗಳನ್ನು ತಪ್ಪಿಲ್ಲದೆ ಹಾಡುತ್ತಾರೆ.ಪ್ರತಿ ದಿನವೂ ಅತ್ತಾವರದಿಂದ ಪುತ್ತೂರಿಗೆ ಪ್ರಯಾಣಿಸುತ್ತಾರೆ.ಈ ಜೀವನ ಅನುಭವ ವೇ ನಮಗೆ ಹೊಸ ಬದುಕನ್ನು ಕಟ್ಟಿಕೊಡುವಲ್ಲಿ ಸಂದೇಹವಿಲ್ಲ. ಸುಮಾರು ಹದಿನೈದು ವರ್ಷದಿಂದ ಅತ್ತಾವರದ ಅಂಧರ ಚಲನವಲನ ಕೇಂದ್ರದಲ್ಲಿ ಪೇಪರ್ ಕವರ್ ಮಾಡಿಕೊಂಡು ತನ್ನ ಬದುಕನ್ನು ಮುನ್ನಡೆಸುವ  ಈಕೆ   ಸಮಾಜಕ್ಕೆ ಮಾದರಿಯಾಗಿದ್ದಾರೆ. ಇವರು ಸೋಮವಾರದಿಂದ ಶುಕ್ರವಾರದ ವರೆಗೆ ಮಾತಿಗೆ ಸಿಗುತ್ತಾರೆ.





No comments:

Post a Comment