Thursday, June 07, 2018

ನಮ್ಮೂರಿನಲ್ಲಿ ದಿನ ಪೂರ್ತಿ ಧಾರಕಾರ ಮಳೆ ಸುರಿದರೂ ಭೂ ಕುಸಿತವಾಗುವುದಿಲ್ಲ ಆದರೂ ಮೊನ್ನೆ ಆಯಿತು!

ಮೊನ್ನೆ ಇದ್ದಕ್ಕಿಂದಂತೆ ಕಡಬ ಸಮೀಪದ ಹೊಸ್ಮಠ ಸೇತುವೆಯ ಪಕ್ಕ ರಸ್ತೆ ಕುಸಿತವಾಯಿತು. ಬಹು ವರ್ಷಗಳಿಂದ ಸಮರ್ಪಕವಾಗಿದ್ದ ರಸ್ತೆ ಕುಸಿಯಲು ಕಾರಣವೇನೆಂದರೆ ಹೊಸ ಸೇತುವೆ ನಿರ್ಮಾಣದ ಸಮಯದಲ್ಲಿ ಪಕ್ಕದಲ್ಲಿ ನದಿಗೆ ಸೇರುತ್ತಿದ್ದ ಕಾಲುವೆಯನ್ನು ಮುಚ್ಚಿದ್ದು. ಮಳೆ ಬಂದಾಗ ಕಾಲುವೆಯ ನೀರು ತನ್ನ ದಿಕ್ಕಿನಲ್ಲಿ ಹರಿಯಲು ಮುಂದಾಗಿ ರಸ್ತೆಯನ್ನು ಕೊಚ್ಚಿಕೊಂಡು ಹೋಗಿತ್ತು
ನಮ್ಮೂರಿನಲ್ಲಿ ಹೊಸದಾಗಿ ಮಾಡಿರುವ ರಸ್ತೆ, ಜೆಸಿಬಿ ಮೂಲಕ ಸಮತಟ್ಟು ಮಾಡಿದ ಜಾಗ, ರೈಲ್ವೇ ಮಾರ್ಗದಲ್ಲಿ ಜೆಸಿಬಿ ತೆಗೆದ ಬರೆ ಇವುಗಳು ಮಾತ್ರ ಮಳೆಗಾಲದ ಸಮಯದಲ್ಲಿ ಜರಿದು ಬಿದ್ದ ಉದಾಹರಣೆಗಳಿವೆ ಹೊರತು ಕೃತಕ ನೆರೆಯಿಂದ ಯಾವುದೇ ಹಾನಿಯಾವುದಿಲ್ಲಅದಕ್ಕೆ ಕಾರಣ ನಮ್ಮಲ್ಲಿ ನೀರು ಬಸಿದು ಹೋಗಲು ಸೂಕ್ತವಾದ ಮತ್ತು ನೈಸರ್ಗಿಕವಾದ ತೋಡುಗಳಿವೆ
ನಮ್ಮ ವ್ಯಾಪ್ತಿಯಲ್ಲಿ ಗದ್ದೆ ತೋಟಗಳಲ್ಲಿ ಮಣ್ಣು ಹಾಕಿ ಮನೆ ,ಕಟ್ಟಡ ಕಟ್ಟಿದವರು ಇಲ್ಲವೇ ಇಲ್ಲ. ಆದರೂ ಇತ್ತೀಚಿಗಿನ ದಿನಗಳಲ್ಲಿ ನಗರವಾಗಿ ಬೆಳೆಯುತ್ತಿರುವ ಕಡಬದಲ್ಲಿ ಗದ್ದೆಗಳಿಗೆ ಮಣ್ಣು ಬೀಳುತ್ತಿದೆ ಕೆಲವು ಕಡೆಗಳಲ್ಲಿ ಕಟ್ಟಡಗಳು ನಿರ್ಮಾಣವಾಗುತ್ತಿದೆ.


ನನ್ನದು ಕಡಬ ಊರು.ಗ್ರಾಮೀಣ ಭಾಗವೆಂದೇ ಗುರುತಿಸಲ್ಪಟ್ಟ ಕಡಬದಿಂದ ಮೂರು ಕಿ.ಮೀ ದೂರದಲ್ಲಿರುವ ಕೋಡಿಂಬಾಳ ಗ್ರಾಮದಲ್ಲಿ ನನ್ನ ಮನೆ.ಕಡಬ ವ್ಯಾಪ್ತಿಯಲ್ಲಿ ಪಂಜ ಅರಣ್ಯ ವಲಯದ ವ್ಯಾಪ್ತಿಗೆ ಒಳಪಟ್ಟ ಕಾಡುಗಳಿವೆ. ಕುಮಾರ ಪರ್ವತದ ತಪ್ಪಲಿನ ವ್ಯಾಪ್ತಿಯಲ್ಲಿರುವ ನನ್ನೂರಿನಲ್ಲಿ ದಿನದ 24 ಗಂಟೆಯೂ ಬಿಡದೆ ಮಳೆ ಸುರಿದ ನಿದರ್ಶನಗಳಿವೆ. ಒಮ್ಮೆಯೂ ನಿರು ಉಕ್ಕಿ ಪ್ರಾಣ ಹಾನಿ,ಆಸ್ತಿ ಹಾನಿ ಸಂಭವಿಸಿಲ್ಲ.ಅಲ್ಲದೆ ಎಲ್ಲೂ ಭೂ ಕುಸಿತ ಉಂಟಾಗುವುದಿಲ್ಲ.ತೋಟದಲ್ಲಿನ ಕಸ ಕಡ್ಡಿಗಳನ್ನು ಕೊಚ್ಚಿಕೊಂಡು ಹೋಗಿದ್ದು ಇದೆ.
ಮೊನ್ನೆ ಮಂಗಳೂರಿನಲ್ಲಿ ಸುರಿದ ಒಂದು ದಿನದ ಮಳೆಗೆ ನಗರವೂ ಸೇರಿದಂತೆ ಬಹುತೇಕ ಕಡೆಗಳಲ್ಲಿ ಭೂ ಕುಸಿತ ಉಂಟಾಗಿದೆ. ಮಾರ್ಗದ ಬದಿಯಲ್ಲಿದ್ದ ಇಂಟರ್ ಲಾಕ್ ಅಪ್ಪಚ್ಚಿಯಾಗಿದೆ. ಅನೇಕ ಮನೆಯೊಳಗೆ ನೀರು ನುಗ್ಗಿದೆ. ನೀರು ಹರಿವ ಜಾಗವನ್ನು ಆಕ್ರಮಿಸಿ ಏನೇ ಮಾಡಿದರೂ ಅದು ನೀರಿನ ಜೊತೆ ವಿಲೀನವಾಗುವುದರಲ್ಲಿ ಎರಡು ಮಾತಿಲ್ಲ. ಮಳೆ ನೀರು ತನ್ನ ನೈಜವಾದ ದಾರಿಯಲ್ಲಿ ಸಾಗಲು ಮುಂದಾಗಿದೆ ಅಲ್ಲವೇ?

No comments:

Post a Comment