Thursday, June 07, 2018

ಲೋಕಲ್ ಬಸ್ಸು, ಎಕ್ಸ್ ಪ್ರೆಸ್ ಟಿಕೆಟು!

ಕಳೆದ ಸೋಮವಾರ ಕಡಬದಿಂದ ಮುಂಜಾನೆ ಮಂಗಳೂರಿಗೆ ಬರಬೇಕಿತ್ತು. ಮೊದಲ ಸಾಮಾನ್ಯ ಬಸ್ಸು6:10 ಸುಮಾರಿಗೆ ಹೋಗುತ್ತದೆ. ಬಳಿಕ 6:30 ರದ್ದು ಎಕ್ಸ್ ಪ್ರೆಸ್ ಬಸ್ಸು.ಇವೆರಡೂ ಬಸ್ಸುಗಳು ಹೋದ ಬಳಿಕ ನಾನು ಕಡಬ ಬಸ್ ನಿಲ್ದಾಣಕ್ಕೆ ಬಂದಿದ್ದೆ.

ಇನ್ನೊಂದು ಬಸ್ಸು ಬರುತ್ತೆ ಎಂದು ಪರಿಚಿತ ಅಂಗಡಿ ಮಾಲಕರು ಹೇಳಿದರು .ಸುಮಾರು 6:45 ಸುಮಾರಿಗೆ ಗ್ರಾಮೀಣ ಸಾರಿಗೆ ಬಸ್ಸು ಬಂತು. ಲೋಕಲ್ ಬಸ್ ಆದಕಾರಣ ಮಂಗಳೂರು ತಲುಪಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಹಾಗಾಗಿ ಉಪ್ಪಿನಂಗಡಿಗೆ ಟಿಕೆಟ್ ಮಾಡಿದೆ. ಟಿಕೆಟ್ ನೋಡಿದ ಬಳಿಕ ದಿನ 28 ರೂ ಇದ್ದದ್ದು 33 ಆಗಿದ್ದು ಆಶ್ಚರ್ಯದಿಂದಲೇ ಕಂಡಕ್ಟರ್ ಬಳಿ ಕೇಳಿದೆ . ಸರ್... ಟಿಕೇಟು ಸರಿ ನೋಡಿ ಇದು ಎಕ್ಸ್ ಪ್ರೆಸ್ ಬಸ್!

 ಹಳೆಯ ಸೀಟುಗಳು, ಕೈ ತೋರಿಸಿದ ಜನರಿಗೆ ಅಲ್ಲಲ್ಲಿ ನಿಲ್ಲಿಸುವುದನ್ನು ಕಂಡು ಕಂಡಕ್ಟರ್ ಬಳಿ ವಾದ ಮಾಡಬೇಕಾಯಿತು. ನನ್ನ ಜೊತೆಗೆ ಅನೇಕ ಸಹ ಪ್ರಯಾಣಿಕರು ಧ್ವನಿ ಗೂಡಿಸಿದರು.ಜೊತೆಗೆ ಮಂಗಳೂರಿಗೆ ಟಿಕೆಟು ಮಾಡಿದವರೂ ಎಚ್ಚೆತ್ತುಕೊಂಡರು. ಬಳಿಕ ಡಿಪೋ ಮ್ಯಾನೆಜರ್ ಗೆ ಕರೆ ಆಗಲೇ ಕರೆ ಮಾಡಿದೆ. ಒಂದೇ ಪೋನು ಆದರೂ ಹಲವಾರು ಅಧಿಕಾರಿಗಳಿಗೆ ವರ್ಗಾವಣೆಯಾಯಿತು. ಕೊನೆಗೆ ಒಬ್ಬರು ಮಾತಿಗೆ ಸಿಕ್ಕರು. ಸಾಮಾನ್ಯ ಬಸ್ಸಿನಲ್ಲಿ ಎಕ್ಸ್ ಪ್ರೆಸ್ ಟಿಕೆಟ್ ಕೊಟ್ಟು ಯಾಕೆ ಸಾರ್ವಜನಿಕರನ್ನು ಸತಾಯಿಸುತ್ತಿರಿ ಕೇಳಿದರೆ, ಬಸ್ ಸಮಸ್ಯೆ ಸಾರ್ ಅಂದರು. ಅಲ್ಲಲ್ಲಿ ನಿಲ್ಲಿಸುವುದು ಯಾಕೆ ಎಂದಿದ್ದಕ್ಕೆ ಎಲ್ಲ ಜನರು ಹೋಗಬೇಕಲ್ವಾ ಸರ್ ಎಂದು ಹಾರಿಕೆಯ ಉತ್ತರ ನೀಡಿದ್ದರು. ಸುಬ್ರಹ್ಮಣ್ಯದಿಂದ ಕಡಬ ಮೂಲಕ ನಿತ್ಯ ಬರುವ ಬಸ್ ಗಳನ್ನು ಕಡಿತ ಮಾಡಿ ಲೋಕಲ್ ಬಸ್ಸಿನಲ್ಲಿ ಎಕ್ಸ್ ಪ್ರೆಸ್ ಟಿಕೆಟ್ ಕೊಟ್ಟು ಜನರನ್ನು ಮೋಸ ಮಾಡುವ ಇಂಥ ಅಧಿಕಾರಿಗಳಿಗೆ ಏನು ಹೇಳಬೇಕು ಗೊತ್ತಾಗುವುದಿಲ್ಲ. ಕುರಿತಂತೆ ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದೆ.

x

No comments:

Post a Comment